
ಒಂದಷ್ಟು ರೆಕ್ಕೆಗಳು
ನನ್ನ ಬಳಿ ಇವೆ,
ಹಾರಿ ಹೋಗುವ ಬಯಕೆ,
ಉದುರಿದ ರೆಕ್ಕೆಗೆ
ಯಾವ ತೆಕ್ಕೆ?
ಗಗನವೂ ಇಲ್ಲ,
ಗಾಳಿಯೂ ಇಲ್ಲ!
ಒಂದಷ್ಟು ಕನಸುಗಳು,
ನನ್ನ ಬಳಿ ಇವೆ,
ಕಣ್ತೆರೆದು ನೋಡುವ ಬಯಕೆ,
ಚದುರಿದ ಕನಸಿಗೆ
ಯಾವ ಮಾನ್ಯತೆ?
ಉಸಿರೂ ಇಲ್ಲ,
ಧಿರಿಸೂ ಇಲ್ಲ!
ಒಂದಷ್ಟು ಹಾಡುಗಳು
ನನ್ನ ಬಳಿ ಇವೆ,
ಎದೆ ತುಂಬಿ ಹಾಡುವ ಬಯಕೆ,
ಮಾತಿರದ ಹಕ್ಕಿಗೆ
ಯಾವ ಸಾಮ್ಯತೆ?!
ನನಗೆ ರಾಗವೂ ಇಲ್ಲ,
ಅನುರಾಗವೂ ಇಲ್ಲ!!
1 comment:
ಒಂದಷ್ಟು ರೆಕ್ಕೆಗಳು
ನನ್ನ ಬಳಿ ಇವೆ,
ಹಾರಿ ಹೋಗುವ ಬಯಕೆ,
ಉದುರಿದ ರೆಕ್ಕೆಗೆ
ಯಾವ ತೆಕ್ಕೆ?
ಗಗನವೂ ಇಲ್ಲ,
ಗಾಳಿಯೂ ಇಲ್ಲ!
What a wordings yaar superb!!! Am speechless, no words is there to say... too good
Post a Comment