
ಸುಮ್ಮನೆ ನಿನ್ನ ನೆನಪು
ಮುತ್ತಿಕೊಳ್ಳುತ್ತದೆ ಗೆಳತಿ,
ನೆನಪು-ತೆರೆದ ಅಂಚೆ!
ನಿನ್ನ ಪಿಸುಮಾತು, ನಗು,
ಮುದ್ದು ಮುನಿಸು
ಎಲ್ಲವೂ ಸಮಾಗಮ.
ನಿನ್ನ ದೂರದೂರಿಗೆ
ನಾನು ಬರೆದ ಭಾವದೊಲೆಗಳ
ಸಂಖ್ಯೆ, ಅಸಂಖ್ಯೆ !
ಮನಸಲ್ಲಿ ಆಹ್ಲಾದದ ಅಲೆ.
ನಿನ್ನನ್ನೇ ಅವಡುಗಚ್ಚಿದಂತೆ
ಎದೆಯಲ್ಲಿ ನನ್ನೊಲವ ಝರಿ,
ಮತ್ತೆ ಹುಡುಕುತ್ತೇನೆ ನಿನ್ನನ್ನೇ,
ತೇಲಿಬಿಟ್ಟ ಕನಸಿನೊಳಗೆ,
ದಿಗಂತದ ಗಾಳಿಪಟದೊಳಗೆ.
ಸಂಜೆ ಸುಮ್ಮನೆ ನಿನ್ನ ನೆನಪು
ಬಿಚ್ಚಿಕೊಳ್ಳುತ್ತದೆ ಗೆಳತಿ,
ಹರಿಯುವುದರೊಳಗೆ ನಸುಕು,
ಬಂದುಬಿಡು ಮಾರುವೇಷದಲ್ಲಿ,
ನೀನು, ನನ್ನ ಪ್ರೀತಿಯ ಬೆಳಕು.
2 comments:
U have given an explicit show of " Sambandha" here. Very nice poem..
Ramya.
ella kavanagalnu odide.....tumba chenagide..manassina kalpanegalgella padagala roopa kottu chenag alankaara maadidiya....nice to c a poet in u...i m really proud to b ur freind..nange isht dina nodake time aagirlila..sorry 4 dat..kp goin wid da same...
Post a Comment