Thursday, July 30, 2009

ನಿನ್ನ ಹುಡುಕುವ ಯತ್ನ...


ಮನಸ್ಸು ತಪೋವನ,
ನೆನಪಿನ ಬೆಳದಿಂಗಳ ಚಂದ್ರಮನ,
ಮಳೆ ಬಿದ್ದ ಮಣ್ಣಿಗೆ
ನಿನ್ನ ಮೈ ಘಮ,
ನೀನು ಯಾವ ಕಾನನದ ಸುಮ?
ಆವರಿಸಿಬಿಟ್ಟೆ ನನ್ನೊಳಗೆ
ಘಮ್ಮನೆ ಬಿಮ್ಮನೆ,
ಹುಡುಕುವೆ ನಕ್ಷತ್ರದ ಕಣ್ಣೊಳಗೆ ನಿನ್ನನ್ನೇ...

ಮನಸ್ಸು ಬೃಂದಾವನ,
ಸುಮ್ಮನೆ ಉಲಿದ ರಾಗ ನೀನು,
ಕಣ್ಣೊಳಗಿನ ಬಿಂಬಕ್ಕೆ
ನಿನ್ನದೇ ರೂಪ,
ತುಟಿಯಲ್ಲಿ ಯಾವುದು ಆರದ ದೀಪ?
ನಿನ್ನ ಪ್ರೀತಿಯ ದ್ರಾವಣದಲ್ಲಿ
ಕರಗಿ ಹೋದ ಲವಣ ನಾನು,
ಮತ್ತೆ ಮರಳಿ ಅರಳುವೆ ನಿನ್ನೊಳಗೆ...

ಮರಳಿ ಮಣ್ಣಿಗೆ....!!


ನಿನ್ನ ನೆನಪಿನ ಹಕ್ಕಿ
ಎದೆಯಾಳದಲಿ ಸಿಕ್ಕಿ,
ಏಕೋ ಬಿಕ್ಕಿ ಬಿಕ್ಕಿ ನೋವು,
ರಾಗವೂ ಹೊಮ್ಮುತ್ತಿಲ್ಲ,
ಅನುರಾಗವೂ ಚಿಮ್ಮುತ್ತಿಲ್ಲ..

ನೆನಪಿನಾಳದಲ್ಲಿ ಹರಿವ ಝರಿ ನೀನು,
ಯಾವುದೋ ನದಿಯೊಳಗೆ ಲೀನ,
ನಾನು ನಿನ್ನ ನೆನಪಲ್ಲೇ ವಿಲೀನ,
ನನ್ನೊಳಗೆ ಝರಿಯಿಲ್ಲ!
ನನ್ನಲ್ಲಿ ಏನೋ ಸರಿಯಿಲ್ಲ...

ಮನೆಯ ಹೆಂಚಿನ ನಡುವೆ
ಮಳೆಗೆ ಜಿನುಗುವ ನೆನಪು,
ನಿನ್ನ ಪ್ರೀತಿಯ ಬಿಸುಪು,
ಮಳೆಯು ಮತ್ತೆ ಮಣ್ಣಿಗೆ,
ನೀನಿಲ್ಲ ಇಲ್ಲಿ,
ನಾನು ಮರಳಿ ಮಣ್ಣಿಗೆ....!!

Wednesday, July 29, 2009

ಸಂಬಂಧ


ಸುಮ್ಮನೆ ನಿನ್ನ ನೆನಪು
ಮುತ್ತಿಕೊಳ್ಳುತ್ತದೆ ಗೆಳತಿ,
ನೆನಪು-ತೆರೆದ ಅಂಚೆ!
ನಿನ್ನ ಪಿಸುಮಾತು, ನಗು,
ಮುದ್ದು ಮುನಿಸು
ಎಲ್ಲವೂ ಸಮಾಗಮ.

ನಿನ್ನ ದೂರದೂರಿಗೆ
ನಾನು ಬರೆದ ಭಾವದೊಲೆಗಳ
ಸಂಖ್ಯೆ, ಅಸಂಖ್ಯೆ !
ಮನಸಲ್ಲಿ ಆಹ್ಲಾದದ ಅಲೆ.

ನಿನ್ನನ್ನೇ ಅವಡುಗಚ್ಚಿದಂತೆ
ಎದೆಯಲ್ಲಿ ನನ್ನೊಲವ ಝರಿ,
ಮತ್ತೆ ಹುಡುಕುತ್ತೇನೆ ನಿನ್ನನ್ನೇ,
ತೇಲಿಬಿಟ್ಟ ಕನಸಿನೊಳಗೆ,
ದಿಗಂತದ ಗಾಳಿಪಟದೊಳಗೆ.

ಸಂಜೆ ಸುಮ್ಮನೆ ನಿನ್ನ ನೆನಪು
ಬಿಚ್ಚಿಕೊಳ್ಳುತ್ತದೆ ಗೆಳತಿ,
ಹರಿಯುವುದರೊಳಗೆ ನಸುಕು,
ಬಂದುಬಿಡು ಮಾರುವೇಷದಲ್ಲಿ,
ನೀನು, ನನ್ನ ಪ್ರೀತಿಯ ಬೆಳಕು.

ನನ್ನ ಹಾಡು!


ಒಂದಷ್ಟು ರೆಕ್ಕೆಗಳು
ನನ್ನ ಬಳಿ ಇವೆ,
ಹಾರಿ ಹೋಗುವ ಬಯಕೆ,
ಉದುರಿದ ರೆಕ್ಕೆಗೆ
ಯಾವ ತೆಕ್ಕೆ?
ಗಗನವೂ ಇಲ್ಲ,
ಗಾಳಿಯೂ ಇಲ್ಲ!

ಒಂದಷ್ಟು ಕನಸುಗಳು,
ನನ್ನ ಬಳಿ ಇವೆ,
ಕಣ್ತೆರೆದು ನೋಡುವ ಬಯಕೆ,
ಚದುರಿದ ಕನಸಿಗೆ
ಯಾವ ಮಾನ್ಯತೆ?
ಉಸಿರೂ ಇಲ್ಲ,
ಧಿರಿಸೂ ಇಲ್ಲ!

ಒಂದಷ್ಟು ಹಾಡುಗಳು
ನನ್ನ ಬಳಿ ಇವೆ,
ಎದೆ ತುಂಬಿ ಹಾಡುವ ಬಯಕೆ,
ಮಾತಿರದ ಹಕ್ಕಿಗೆ
ಯಾವ ಸಾಮ್ಯತೆ?!
ನನಗೆ ರಾಗವೂ ಇಲ್ಲ,
ಅನುರಾಗವೂ ಇಲ್ಲ!!

Mother


Tell me, have you seen God?
Tell me,like my mother is your God?!,
Tell me, does He feeds when I cry?,
Tell me, does He hug when I fall?,
Tell me, His eyes are as lovely as my Mother,
Tell me, His face as smiley as my Mother,

Take it from me, you haven’t seen God,
I have seen God and it is my Mother,
like Her no other!!

Let...

Let Myself laugh whilst I laugh,
let myself act thou laugh whilst you weep,
smile stays always with our company,
let thou self deaf for the scolds you receive,
Let thyself laugh and transfer up to me!
Smile shines east and west!
let thou wait, time too wear out!
let you learn all with calm and spirits,
let smile sprouts with blossom,
let you till the peace with your silence,
Sure, we both are inseparable,
You are in me and me in you,
Blooded together!

ನಿವೇದನೆ...


ಕನಸಿನಲ್ಲಿ ನೀ ಹಾಡಿದ ಹಾಡು,
ಯಾವ ನಿವೇದನೆ?
ನಿನ್ನೆಯ ಕನಸು
ನೆನಪಿಲ್ಲವೋ ಹುಡುಗ,
ಕನಸು ಬೇಡ,
ಮನಸಾಗಿ ನಿಲ್ಲಲೇನೋ?
ನಿನ್ನ ಹಾಡು-ನಿನ್ನ ರವಾನೆ,
ನನಗೆ ಹೇಳಲೇನೋ?

ನೀ ಹಾಡುವುದೆಲ್ಲ
ಅರ್ಥವಾಗುವುದೇ ನಲ್ಲ?
ನಿನ್ನ ಹಾಡು,ನಿನ್ನ ರಾಗ,
ನನ್ನ ಅಂತರಂಗ ವಲ್ಲವಲ್ಲ,
ನಾದ ಮೃದಂಗ?

ನಾನ್ಯಾವ ಜಾಣೆ?
ಹಾಡು-ಕವಿತೆ ನನಗೆ ಒಲ್ಲದು!
ಮನದ ವೀಣೆ,
ನುಡಿಸಿದ ಹಾಡು,
ನನಗೆ ಕೇಳದು!

ಉಪಯೋಗ

ನಾ ಬರೆದ ಕವನಗಳ ಸಾಲು ಸಾಲಿನಲ್ಲಿ,
ಕನ್ನಡದ ಕವಿ ಶ್ರೇಷ್ಟರ ಕೆಲವು ಚೆನ್ನುಡಿಗಳು
ಮೂಡಿದರೆ ಆಗಿಬಿಡುವುದು ನನ್ನದು ಒಂದು ‘ಮಿನಿ’ಗವನ!
ಭಾವ ತುಂಬಿದೆ ಒಳಗೆ.ಅರ್ಥ ಬೆರೆಸುವೆ ಜೊತೆಗೆ,
ನಾದ ತುಂಬಿ ಹಾದಿ ಬಿಡುವೆ ಇನ್ನೇನು ಎಂದು ಬೀಗುತಿರೆ,
‘ಕವನ ಮಿನಿಯೋ, ಮೆನಿಯೋ, ಹನಿಯೂ ಸಾಕು
ಓಲೆ ಹಚ್ಚಲು’ ಎನ್ನುವಳು ನನ್ನವಳು !!

ಕವನ – ಅದೇನು ಮಹಾ..?

ನಾ ಹೊಸೆಯ ಹೊರಟೆ ಕವನ ಒಂದು,
ಅದೇನು ಮಹಾ ಎಂದು!
ತಿಳಿಗನ್ನಡ, ನುಡಿಗನ್ನಡ ತಿಳಿದಿದ್ದರಾಯ್ತೆಂದೇ!
ತಿಣುಕಾಡಿದೆ, ಪರದಾಡಿದೆ,ಹೊಳೆಯದೇತಕೆ ಪದ ಒಂದು,
ಸ್ಫೂರ್ತಿ ಮೂಡದೆ ಹೇಗೆ ಬರೆಯಲಿ ಕವನ ಒಂದು!
ತಂಪು ಪಾನೀಯ, ಬಿಸಿ ಪಾನೀಯ, ಹುರಿದ ಗೋಡಂಬಿ,
ಪ್ರಕೃತಿಯ ತಾಣ,ಮರ-ಗಿಡ, ನದಿ-ಬೆಟ್ಟ, ಪಕ್ಷಿಗಳ ಸಂಘ,
ಮೂಡಿಸದಾಯ್ತೆನಗೆ ಸ್ಪೂರ್ತಿ,
ಅದಿಲ್ಲದೆ ನಾ ಹೇಗೆ ಬರೆಯಲಿ ಕವನ?
ನನ್ನಂಥವನಿಗೆ ಹೀಗಾಗಿರಬೇಕಾದರೆ, ಹೇಗಾಗಿರಬೇಕು,
ಪಾಪ,ಪಂಪ,ರನ್ನರಿಗೆ, ಕುವೆಂಪು, ನಿಸಾರರಿಗೆ!
ಎಂದೆನಿಸಿ ಮರುಗಿತೆನ್ನ ಮನ,
ಇರಲಿ ಒಮ್ಮೆ ನೋಡೇ ಬಿಡೋಣ ಅವರ ಬರಹ
ಎಂದು ಹುಡುಕಿ ನೋಡಿದರೆ, ಏನಾಶರ್ಯ!!
ನಾ ಬರೆಯಬೇಕೆಂದಿದ್ದ ಪದಗಳು,ಸಾಲುಗಳು,
ಅವರಾಗಲೇ ನನ್ನಿಂದ ಕದ್ದು ಬರೆದೆ ಬಿಟ್ಟಿದ್ದಾರೆ,
ನಾ ಮಾಡಬೇಕಾದದ್ದು ಅವರೇ ಮಾಡಿರುವಾಗ,
ನಾ ಏಕೆ ಹೊಸೆಯಬೇಕು ಮತ್ತೊಂದು ಕವನ?!

ಸಚಿನ್ ತೆಂಡುಲ್ಕರ್ v/s ಶೇನ್ ವಾರ್ನೆ!!


ನಾನಾಗಿದ್ದೆ ನನ್ನ ಕನಸಿನೊಳಗೆ ಸಚಿನ್ ತೆಂಡುಲ್ಕರ್,
ಬರ್ತಿದ್ದ ಬಾಲನೆಲ್ಲ ಬಾರಿಸ್ತಿದ್ದೆ ಸಿಕ್ಸರ್!
ಹೋಡೀ ಬೇಡವೋ ನನ್ನ ಬಾಲ್ನಾಚ್ಗೆ ಎಂದು ಬೇಡಿಕೊಳ್ಳುತ್ತಿದ್ದ
ಶೇನ್ ವಾರ್ನೆ ನೋಡಿ ಬಿದ್ದು ಬಿದ್ದು ನಗ್ತಿದ್ದೆ ನನ್ನ ಕನಸಿನೊಳಗೆ.

ಹೊಡ್ದ್ದೂ ಹೊಡ್ದ್ದೂ ಸಿಕ್ಸರ್ಗಳ್ನ ನಾನಾಗಿದ್ದೆ ಸುಸ್ತು,
ಏಳಲಾಗದೆ ಬಿದ್ದುಕೊಂಡಿದ್ದೆ ಬೆಳಗಾಗಿದ್ದ್ರು ಬಹಳ ಹೊತ್ತು!
ಬಿದ್ದ್ಕೊಂಡಿದ್ದ ನನ್ನ ನೋಡಿ ಅಪ್ಪನಿಗ್ಬಂತು ಕೋಪ,
ಸಿಕ್ಸರ್ಗಳ್ನ ಬಾರಿಸ್ಬಿಟ್ಟ ನನ್ನ ಬೆನ್ನ ಮೇಲೆಲ್ಲಾ ಅಯ್ಯಯಪ್ಪ!
ನನಗೆ ಹೊಡೆದಿದ್ದ್ ನೋಡಿ ಬಲು ಖುಷಿ ಆಗಿರಬೇಕು ವಾರ್ನೆಗೆ,
ನಾಳೆ ರಾತ್ರಿ ನನ್ನ ಕನಸಿನಲ್ಲಿ ಕಾಣಿಸ್ತೀನಿ ಒಂದ್ ಗತಿ,
ಅವನ್ ಹಾಕೋ ಬಾಲ್ಗೆ!

Search This Blog