
ಮರಳಿ ಬಾರದಿರು
ಮಣ್ಣುಗೂಡಿದ ಒಲವೆ,
ಬೆಂಕಿಗೂಡಿಗೆ ನೂಕದಿರು ಮತ್ತೆ,
ಮನದಗೂಡಿನ ಒಳಗೆ
ಮುರಿದ ತರಗೆಲೆಯ ನನ್ನೆದೆಗೆ,
ಪ್ರೇಮತಂಗಾಳಿ ತಾಕದಿರು ಮತ್ತೆ!
ಕಣ್ಣ ರೆಪ್ಪೆಯ ಒಳಗೆ
ಬಚ್ಚಿಟ್ಟ ಭಗ್ನ ಕನಸುಗಳು,
ಕರಗಿ ಕೆನ್ನೆಯಲಿ ಜಾರುತಿಹುದು,
ಸುಪ್ತ ಬಯಕೆಗಳು
ಅವಿಶ್ರಾಂತ ಕೊಠಡಿಯಲಿ,
ಹಾಡದೆ, ಬಾಡದೆ, ಕಾಡುತಿಹುದು!
ಮರಳಿ ಬಾರದಿರು
ಮಣ್ಣುಗೂಡಿದ ಒಲವೆ
ನೆನಪುಗಳ ಅಲೆಯಲ್ಲಿ ಮತ್ತೆ,
ಒಡಲಾಗ್ನಿಯ ಭುಗಿಲೊಳಗೆ
ತೆರಳಿಹೋಗುವೆ ನಾನು,
ಜ್ವಲಿಸಿಹೋಗಲೇನು ಮತ್ತೆ-ಮತ್ತೆ...?!
16 comments:
chennagide ...
hi vinay,,tumba chennagide...
matte matte..inta kavanagalu baruttirali....
ವಿನಯ್ ಸರ್,
ತುಂಬಾ ಚೆನ್ನಾಗಿದೆ
ನೆನಪುಗಳ ಮಧುರತೆಗೆ ನೀವು ಹೇಳುವ ಸಂದೇಶ ಬಹಳ ಇಷ್ಟವಾಯಿತು
ಮತ್ತೆ ಮತ್ತೆ ಕೆದಕುವ ಹಳೆಯ ನೆನಪುಗಳು ಹಿತವಾದರೆ ಚೆನ್ನ,
ಇಲ್ಲದಿರೆ ಬದುಕೇ ಬರಡಾಗುತ್ತದೆ
ಒಳ್ಳೆಯ ಕವನ
ಸತ್ಯ, ಕವನ ಇಷ್ಟ ಪಟ್ಟಿದಕ್ಕೆ ಧನ್ಯವಾದ. ಗುರು, ನೆನಪುಗಳು ಮಧುರವಾಗಿದ್ದರೆ, ಮನಸ್ಸು ನೆನಪುಗಳಲ್ಲೇ ಜೀವಿಸಲು ಇಚ್ಚಿಸುತ್ತದೆ. ಕೆಲವು ನೆನಪುಗಳು ಅನೈಚ್ಚಿಕ! ನಿಮ್ಮ ಮಾತು ಸತ್ಯ. ಧನ್ಯವಾದ ಗುರು.
ಕವಿತೆ ಅಧ್ಬುತವಾಗಿದೆ ವಿನಿ. ಬೇಡದ ನೆನಪುಗಳು, ಬಾರದಂತೆ ಹೇಳುವ ಕವಿತೆ ಇಷ್ಟವಾಯಿತು. ಕವಿತೆಯಲ್ಲಿ, ನೋವು ಆದರೆ ತೀವ್ರತೆ ಅರ್ಥವಾಗುತ್ತದೆ. ಹೀಗೆ ಬರೀತಿರು...
-ರಮ್ಯ.
ಕವಿತೆ ಮೆಚ್ಚಿಕೊಂದಿದಕ್ಕೆ ಧನ್ಯವಾದ ರಮ್ಯ.
ಸುಂದರ ಸಾಲುಗಳು ವಿನಯ್ :) :) :)
ನನ್ನ ಒಂದು ಭಾವಯಾನದ ಸಾಲು ಹೀಗಿದೆ.
ಹೋಗುವುದಾದರೆ ಹೋಗಿಬಿಡು. ನಾ ತಡೆಯಲಾರೆ.
ಮನಪಾತಾಳದಲಿ ಮೂಡಿಸಿದ್ದ ಹೆಜ್ಜೆ ಗುರುತುಗಳನಳಿಸಿಬಿಡು
ಬಂದಷ್ಟೆ ನಯವಾಗಿ ಹೋಗುವುದಾದರೆ ಹೋಗಿಬಿಡು ನಾ ತಡೆಯಲಾರೆ.
Vinay
Nenapugalu kaadadiddare namma kaviyavaru ishtu chennagi kavite bareyalu hege sadhya? Tumbaa chennagide kavite.
ಸುಂದರ ಕವಿತೆ.. ಒಳ್ಳೆಯ ನೆನಪುಗಳು ಜೊತೆಯಲಿ ಇರಲಿ... ಕಹಿ ನೆನಪು ಗಾಳಿಗೆ... :)
ನಿಮ್ಮವ,
ರಾಘು.
hi,nimma eee kavana vannu odidaaga
k.s. nisar ahammad avarannu nenapaayithu.aa mattakke beledu bareyutthiruva nimma kavi hrudayakke nanna hruthpoorvaka abhinandanegalu.benkigoodige.....odalaagniya bhugilolage......... wow.....adbhutha...saalugalu...!
Superb!....
ರಘು, ನಮಗೆ ಕವಿತೆ ಇಷ್ಟವಾಗಿದಕ್ಕೆ ನಾನು ಧನ್ಯ.
ದಿನಿ ಮೇಡಂ, ನಿಮ್ಮ ಪ್ರೋತ್ಸಾಹವೇ ನನ್ನ ಕವಿತೆಗೆ ಆದಾಯ.
ಪ್ರಮಿಳ ಮೇಡಂ, ಕೆ.ಎಸ್. ನಿಸ್ಸಾರರು ಕವಿ ಶ್ರೇಷ್ಟರು. ನನ್ನ ಕವಿತೆಗಳು ಅಂಥಹ ಕವಿಗಳ ಚೆನ್ನುದಿಗಳ ಎರವಲು, ಅಷ್ಟೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..
ಗುಡ್ ಸರ್ :)
Thanks a lot Gautham :-)
Regards,
Vinay.
ವಿನಯ್...
ನಿಮ್ಮಷ್ಟೆ ಸುಂದರವಾಗಿದೆ ಕವನ...
ಶಬ್ಧಗಳಲ್ಲಿ ಹಿಡಿತವಿದೆ...
ಇನ್ನಷ್ಟು ಕವನ ಬರಲಿ...
ಚಂದದ ಕವಿತೆಗೆ ಅಭಿನಂದನೆಗಳು...
Post a Comment