
ಮೌನ-ಶೃಂಗಾರ!
ಮೌನ ಒಂದು ಒಪ್ಪಿಗೆ,
ಕೆನ್ನೆಯ ಕೆಂಪಿನ ಅಪ್ಪುಗೆ!
ನಿನ್ನೆಯ ಸಣ್ಣ ಮುನಿಸು,
ನಾಳೆಗೆ ಬರಿ ನೆನಪು!
ನಿನ್ನೆ-ನಾಳೆಯ ನಡುವೆ
ನನ್ನದು-ಪ್ರೀತಿ,ಪ್ರೀತಿ,ಪ್ರೀತಿ...!
ಮೆಲ್ಲಗೆ ಪಿಸುಗುಡಲೇ
ನಿನ್ನ ಕಿವಿಯೊಳಗೆ?
ಉಸಿರ ಹೆಸರಿನ ನನ್ನ ಮಾತು,
ಪ್ರೀತಿ,ಪ್ರೀತಿ,ಪ್ರೀತಿ...!
ನನ್ನ ಮೌನ-ಹೆಬ್ಬಯಕೆ!
ನಿನ್ನ ಮಾತು-ರಸಕಾವ್ಯ!
ಇದು ಆಡಂಬರವಲ್ಲ,
ನಿತ್ಯ ಕೈಂಕರ್ಯ,
ನನ್ನ ಪ್ರೀತಿ...!!
19 comments:
hey i ll grab all ur blogs my god its wonderfull
Ashy, Please leave some traces to me too..! :-o
Thanks a lot Ashy! :-)
ಮಾತು-ಮಳೆ,
ಮೌನ-ಶೃಂಗಾರ!
ಮೌನ ಒಂದು ಒಪ್ಪಿಗೆ,
ಕೆನ್ನೆಯ ಕೆಂಪಿನ ಅಪ್ಪುಗೆ!
ಎಷ್ಟೊಂದು ಮುದ್ದಾದ ಸಾಲುಗಳು
ಸುಂದರ ಕವನ
nice boss:)
ನಿನ್ನೆಯ ಸಣ್ಣ ಮುನಿಸು,
ನಾಳೆಗೆ ಬರಿ ನೆನಪು!
ನಿನ್ನೆ-ನಾಳೆಯ ನಡುವೆ
ನನ್ನದು-ಪ್ರೀತಿ,ಪ್ರೀತಿ,ಪ್ರೀತಿ...!
this was superb ,,,vinay....tumba isht aaytu keep writing
ಬಹಳ ಚನ್ನಾಗಿದೆ ಕವನ.
ಅಬ್ಬಬ್ಬಾ , ನಿಮ್ಮ ಈ ಬ್ಳಾಗ್ ನಾನು ನೋಡೇಇರ್ಲಿಲ್ಲ
ನಿಮ್ಮ ಕವನಗಳು ಬಹಳ ಅದ್ಬುತವಾಗಿವೆ. ಎಂತಾ ವರ್ಣನೆ ನಿಮ್ದು. ಮೌನದಲ್ಲೆ ಎಲ್ಲ ಮಾತು ಆಡಿ ಮುಗಿಸ್ಬಿಟ್ರಲ್ಲಾ :)
ಹೀಗೆ ಬರೀತಿರಿ.
Estondu preethi thumbidiya ee kavanadalli, Super kavana Vinay.
ಗುರು, ಕವನ ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು.
Eru, ನೀವು ಬಂದು ಇಷ್ಟೊಂದು ಪ್ರೀತಿ ಸಿಂಪಡಿಸಿದ ಮೇಲೆ ಇಷ್ಟಾದರೂ ವ್ಯಕ್ತವಾಗದಿದ್ದರೆ ಹೇಗೆ...?!
ಸತ್ಯ, ಎಂದಿನಂತೆ ನಿಮ್ಮ ಪ್ರೋತ್ಸಾಹ ಹೀಗೆ ಇದೆ. ಧನ್ಯವಾದ ಸತ್ಯ.
ನಿಶಾ, ಕವನದ ಹೂರಣ ನಿಮಗೆ ಮುದ ನೀಡಿದಕ್ಕೆ, ಕವನದ Mission accomplished ;-)
ವಿನಿ, ಪ್ರೀತಿ ಆಡಂಬರವಲ್ಲ, ನಿತ್ಯ ಕೈಂಕರ್ಯ ಅನ್ನೋ ನಿನ್ನ ಭಾವ ಇಷ್ಟ ಆಯ್ತು. ನನ್ನ ಕಿವಿಯೊಳಗೂ ಯಾರೋ ಪಿಸುಗುಡುವಂತಿದೆ ನಿನ್ನ ಕವಿತೆ. ಮಧುರ-ಮಧುರ!
-Ramya.
short and sweetagi ide... :)
aa paintingu kooda kavanakke poorakavaagide:)
ಮಾತು-ಮಳೆ,
ಮೌನ-ಶೃಂಗಾರ!
ಮೌನ ಒಂದು ಒಪ್ಪಿಗೆ,
ಕೆನ್ನೆಯ ಕೆಂಪಿನ ಅಪ್ಪುಗೆ!
These are Very Sweet words... nice poem i liked it. This poem suits that purticular picture.
ರಮ್ಯ, ಕವಿತೆಯ ಮಾಧುರ್ಯ, ನನ್ನ ಆಂತರ್ಯ ಅರಿತಿದಕ್ಕೆ ಧನ್ಯವಾದಗಳು.
ಶ್ರುತಿ, ನಿನ್ನ ಹೆಸರಿನಂತೆ ನಿನ್ನ comment ಸಹ ಚಿಕ್ಕದಾಗಿ, ಆಪ್ತವಾಗಿದೆ. ನಿನ್ನ ಮಾತುಗಳು ಹೀಗೆ ಪ್ರೇರಕವಾಗಿರಲಿ.
ದಿನಿ ಮೇಡಂ. ನಿಮ್ಮ ಮೆಚ್ಚುಗೆಯಲ್ಲಿ ನನ್ನದೇನು ಹೆಚ್ಚುಗೆ...? ಧನ್ಯವಾದ...
ವಿನಯ್...
ಬಹಳ ಸುಂದರವಾಗಿ..
ರಮ್ಯ ಶೃಂಗಾರವಾಗಿದೆ.. ನಿಮ್ಮ ಪ್ರೇಮ ಕವಿತೆ..
ಇಷ್ಟವಾಯಿತು..
ಪ್ರತಿ ಸಾಲುಗಳು..
sundaravaagide ee kavithe!
nice one!
keep writing..
tumba chennagi barediddiri... keep writting...
Nimmava,
Raaghu.
nice poem
Post a Comment