
ಕವಿತೆ ಹಿತ್ತಲ ಗಿಡ,
ಹಿತ್ತಲ ಗಿಡ ಮದ್ದಲ್ಲ!
ಯಾರೋ ಮೈಮರೆತು ಬೀಳಿಸಿದ ಮಡಿಕೆಯ
ಚೂರಾದ ಕವಿತೆ ನಾನು,
ಹಿಂತಿರುಗದ ಬಾಣ
ಖಾಲಿಯಾದ ಬತ್ತಳಿಕೆ!
ಕಾಣದ ತೀರದ
ಆಸೆಯ ಅಲೆಯ ಬಲೆಗೆ
ಸಿಲುಕಿ ಸೋತುಹೋದ ಕವಿತೆ ನಾನು!
ನಿರ್ಜೀವ ಬಯಕೆಗಳ
ಬಯಸುವ ಮನಕೆ
ದುಃಖದ ಮೂಲ ಹುಡುಕುವ ಕವಿತೆ ನಾನು!
ವ್ಯಾಪ್ತಿ ಮೀರಿ,
ವ್ಯಾಸವನ್ನೇ ಸೇರಿ,
ದಾಟಿಹೋಗುವ ನಿರ್ಲಿಪ್ತ ಮುಕ್ತ ಕವಿತೆ ನಾನು!
12 comments:
ತುಂಬಾ ಚೆನ್ನಾಗಿದೆ ವಿನಿ. " ವ್ಯಾಪ್ತಿ ಮೀರಿ...ನಿರ್ಲಿಪ್ತ ಮುಕ್ತ ಕವಿತೆ.." ಮುಕ್ತತೆಯನ್ನ ಚೆನ್ನಾಗಿ ವರ್ಣಿಸಿದ್ದೀಯ...!
except 1st phara remaining is good.
kalaathmakavaada kaavya rachaneyondige navyathe nimma kavithegalalli eddu kaanutthade.ola aanthryada bhaavavannu,badukina viparyaasagalannu kavitheyaagisi bahu maarmikavaagi,sogasaagi anaavaranagolisiddeera.eg;kaanada theerada.....siluki sothu hoda kavithe naanu...!
@ Prabhu - I know. The 1st para is little unfashionable. I notice the same while writing. I will explain u what I felt When I wrote. It's just simple as if A=B and B=C, then A=C.
If ನಾನು=ಕವಿತೆ
and ಕವಿತೆ=ಹಿತ್ತಲ ಗಿಡ,
Then,ನಾನು=ಮದ್ದಲ್ಲ!! ;-)
i know it's weird!
Thanks for your comments.
ಪ್ರಮೀಳ ಮೇಡಮ್, ನಿಮ್ಮ ಮೆಚ್ಚುಗೆ ಗೆ ತುಂಬಾ ಧನ್ಯವಾದಗಳು :-))
ಬಹಳ ಚನ್ನಾಗಿದೆ ವಿನಯ್, ನಿಜ, ನೀವು ಕವಿತೆ ಅಲ್ಲ, ಅದರೆ ಕವಿ ಮಾತ್ರ ಹೌದು. :)
ನಿಮ್ಮ ಬಯಕೆಗಳು ಈ ಕವಿತೆಯ ಮೂಲಕೆ ಹೀಗೆ ಹೊರಗೆ ಬರುತಿರಲಿ. ತುಂಬಾ ಚನ್ನಗಿದೆ ಕವಿತೆ.
Hi Vinay, Good1 kano.,
Keep the good work .. :)
ನಿಮ್ಮ ಕವಿತೆ ಚೆನ್ನಾಗಿದೆ..ಇಷ್ಟ ಆಯಿತು.
hi vinay tumba chennaagide,,,,i liked first para,,,,,really...its nice keep writing..
ತುಂಬಾ ಚೆನ್ನಾಗಿದೆ ಸರ್
ಧನ್ಯವಾದಗಳು Dr.ಗುರು, ಸತ್ಯ ಹಾಗೂ ವೆಂಕಟ್ ಸರ್. ನಿಮ್ಮ ಮೆಚ್ಚುಗೆಗೆ ಸಂತುಷ್ಟ..
-Vinay.
ವಿನಯ್, ಚನ್ನಾಗಿದೇರೀ ಕವಿತೆ..ಯಾರು ಹೇಳಿದ್ದು ಹಿತ್ತಲ ಗಿಡ ಮದ್ದಲ್ಲ ಅಂತ...ಇಂಗ್ಲೀಷ್ ಔಷಧಿಗಳ ಸೈಡ್ ಎಫೆಕ್ಟ್ಸ್ ನಿಂದ ಸೋತು ಸುಣ್ಣವಾಗಿರೋ ಅಮೇರಿಕನ್ನರೂ, ಹರಿಶಿಣ, ತುಳಸಿ, ಬೆಳ್ಳುಳ್ಳಿಗೆ ಮೊರೆ ಹೋಗ್ತಿದ್ದಾರೆ..ಅದ್ರಲ್ಲಿ ನಿಮ್ಮ ಈ ಅಚ್ಚುಕಟ್ಟು ಕವಿತೆ...ಯಾಕೆ ಇಷ್ಟವಾಗುವುದಿಲ್ಲ..?
Post a Comment