
ನಿನ್ನ ಒಲವಿನ ಎಳೆಯನ್ನು
ಎಳೆದು ಬಿಡಿಸಿದ ಶುಭ್ರ ರಂಗವಲ್ಲಿ.
ನನ್ನ ಕಣ್ಣಿನೊಳಗೆ ಈ ಮೌನ ಸೂರ್ಯ
ಮುಳುಗಿಹೊಗುತ್ತಾನೆ,
ನಮ್ಮಿಬ್ಬರ ನಡುವೆ ಬೆಳದಿಂಗಳು
ಬಲೆಯಾಗಿ ಹಬ್ಬುವ ಸಮಯ.
ನನ್ನೆದೆಯ ಪುರವಾಣಿಯಲ್ಲಿ
ನಿನ್ನ ಒಲವ ಗೀತೆ ಪ್ರಕಟ,
ಹಾಡಿಹೋದ ಸ್ವರಗಳಲ್ಲಿ
ನೀನು ಮಾತ್ರ ನಿಕಟ!
ನನ್ನ ನೋಟ ನಿನ್ನ ಕಣ್ಣಿನೊಳಗೆ
ಇಳಿದು ಹೋಗುತ್ತದೆ,
ಏನು ಮಾಡಲಿ,
ಮನಸ್ಸು ನಿನ್ನೊಳಗೆ
ಕಳೆದು ಹೋಗುತ್ತದೆ.
ನಾನು ಪ್ರತಿಬಾರಿಯೂ ಮುಗುಳ್ನಕ್ಕು
ನಿನ್ನ ಉತ್ತರಕ್ಕಾಗಿ ಕಾಯುವ ಹುಡುಗಿ,
ಹೋಗಿಬಿಡುವೆ ನಿನ್ನೊಳಗೆ ಕರಗಿ,
ಗೆಳೆಯ, ಬೇಡ ಬಿಡು ನನ್ನ ಹುಡುಕುವ ವಿಫಲಯತ್ನ!
8 comments:
Thumba chennagide....
ಮನಸ್ಸಿನ ತಿಳಿಹಾಳೆಯಲ್ಲಿ
ನಿನ್ನ ಒಲವಿನ ಎಳೆಯನ್ನು
ಎಳೆದು ಬಿಡಿಸಿದ ಶುಭ್ರ ರಂಗವಲ್ಲಿ.
wooooooooow nice wordings. Nimma kalpanegalu chennagive anta gottu. Kalpanegannu shabdagalinda ponisiddu bahala chennagide.
ತುಂಬಾ ಧನ್ಯವಾದಗಳು. ಮೆಚ್ಚುಗೆಯ ಹಾರೈಕೆಗೆ ಧನ್ಯ.
vinay...
i dnt knw wat to say in one word its awesome...
manada goodinda hora banda haadu
galalli hakkiya manadaalada aase ele eleyaagi horabarutthiruvanthide.hakkiya haadina impu janamanavannu thattali jathege,halavu sundara hoogalu seri hoseda hooguchhavondu kampina rasadauthanavannu odugarige needali endu haaraisuve.
Really good one...
ಪ್ರತಿಯೊಂದು ಹನಿಗಳೂ ತುಂಬಾ clear ಆಗಿವೆ ಕಣೋ.ತುಂಬಾ ನೇ ಇಷ್ಟ ಆಯ್ತು.ಹೀಗೆ ಬರೀತಿರು.
"ನಾನು ಪ್ರತಿಬಾರಿಯೂ ಮುಗುಳ್ನಕ್ಕು
ನಿನ್ನ ಉತ್ತರಕ್ಕಾಗಿ ಕಾಯುವ ಹುಡುಗಿ"
Mind u...
Love,
Ramya.
Post a Comment