
ಸುಮ್ಮನೆ ನಡೆದು ನಡೆದು
ನನ್ನ ಗಡಿಯಾರದ ಕೈಗಳಿಗೆ
ಕಾಲು ನೋವು ಬಂದು,
ದಾರಿಯುದ್ದಕ್ಕೂ ಮೈಯ ಚಾಚಿ,
ಮಲಗಿದಂತೆ ಮಾಡಿ,
ಮಲಗದಂತೆ ನೋಡಿ,
ಒಂದು ಕನಸು ಕಾಣುವಲ್ಲಿ
ಕಾಯಕದ ತವಕ...!
ಎಂದೋ ಒಮ್ಮೆ
ನನ್ನದೆ ಸವೆದ ದಾರಿಯಲ್ಲಿ
ನಾನೇ ತಿರುಗಿ ತಿರುಗಿ,
ತಲೆಸುತ್ತು ಬಂದಂತೆ ನಟಿಸಿ,
ನನ್ನ ನಟನೆಗೆ ನಾನೇ ಜೀವತುಂಬುತ್ತಾ,
ಕಾಲದ ಹರಿವಿನಲ್ಲಿ,
ನನ್ನ ಅಸ್ತಿತ್ವದ ಇರುವಿನಲ್ಲಿ
ಸದಾ ಹರಿವ ಬಯಕೆ...
ಇಲ್ಲೆಲ್ಲೋ ಪ್ರಳಯದ ಮಾತಾಗಿದೆ,
ನನಗದು ಅಪ್ರಸ್ತುತ!
ನಿನ್ನೆಯ ಘಳಿಗೆ-ನೆನಪಿಗೆ ಸೀಮಿತ,
ನಾಳೆ,ಅಸೀಮಿತ,
ನಿನ್ನೆ-ನಾಳೆಯ ಮೀರಿ,
ಇಂದಿಗಷ್ಟೇ ಬಾಳುವ ಯತ್ನ,
ಮತ್ತೆ...
ಏರುಹೊಲೆಯ ದಾರಿ ದಾಟಲೇಬೇಕು,
ಕಾಲದೊಡನೆ ಕಾಲವಾಗಲೇಬೇಕು...!
23 comments:
ಮಲಗಿದಂತೆ ಮಾಡಿ, ಮಲಗದಂತೆ ನೋಡಿ........ ಸುಂದರ ಸಾಲುಗಳು.....
ಜೀವನ ದರ್ಶನ ಮಾಡಿಸಿದ ಹಾಗಿದೆ ವಿನಯ್ :) :) :)
good one! keep writing..
ಚೆನ್ನಾಗಿದೆ.......:)
ಕಾಣದ ಕೈಯಲ್ಲಿ ಸಮಯ,
ಅದರ ಜೊತೆ ನಡೆಯ ಬೇಕು ಇಲ್ಲ, ಓಡಬೇಕು ಅದು ಹೇಗೆ?
ಓಡಿದರೆ ನನ್ನ ನಾ ಮರೆತಂತೆ....!!!
ನಾವು ಸಮಯವನ್ನೇ ಮೀರಬೇಕು ಅದು ಹೇಗೆ???
ಉತ್ತರ ಹುಡುಕುವುದು ನಿರರ್ಥಕ!!!!
ಚೆನ್ನಾಗಿದೆ ವಿನಿ :)
ಕಾಲವನ್ನು ತಡಿಯೋರು ಯಾರು ಇಲ್ಲ.....
ತುಂಬಾ ಮೋಹಕ ಸಾಲುಗಳು
ಆ ಚಿತ್ರಕ್ಕೆ ಇನ್ನೂ ಚೆನ್ನಾಗಿ ಹೊಂದಿಕೊಳ್ಳುತ್ತವೆ
Realy Heart Touching with b'ful meaning Kala Kavana....
I liked It vry much...
RK, ಜೀವನ ದರ್ಶನವಾಗುವಷ್ಟು ಬೃಹತ್ ಅರ್ಥ ಹೊಂದಿಲ್ಲ ಈ ಕವಿತೆ. ಅರ್ಥಿಸಿಕೊಳ್ಳಲು ಸಾಕಷ್ಟಿದೆ. ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದ.
ಶುಶ್ರುತ, ಇಷ್ಟ ಪಟ್ಟಿದಕ್ಕೆ ಧನ್ಯವಾದ.
ಗುರು, ಶರು ಹಾಗು ಹರ್ಷ, ಕವಿತೆ ಏನು ಭಾವವನ್ನು ಹೊರಹೊಮ್ಮುತ್ತದೋ ಏನೋ, ನಾ ಕಾಣೆ. ನೀವೆಲ್ಲ ಮೆಚ್ಚಿದ್ದೀರ. ನಿಮ್ಮ ಮೆಚ್ಚುಗೆಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು.
very nice.......
'ಕಾಲದ ಜೊತೆ ಕಾಲವಾಗಬೇಕಿದೆ'ಎನ್ನುವ ಸಾಲುಗಳು ಮಾರ್ಮಿಕ.ಕಾಲ ಯಾರಿಗೂ ಕಾಯುವುದಿಲ್ಲ.ನಾವು ಮಲಗಿದರೂ ಅದು ಓಡುತ್ತಲೇ ಇರುತ್ತದೆ ,ಎಲ್ಲವನ್ನೂ ಹಿಂದೆ ಬಿಟ್ಟು ,ಎಲ್ಲವನ್ನೂ ಅರಗಿಸಿಕೊಳ್ಳುತ್ತಾ !ಕವನ ಸುಂದರವಾಗಿದೆ.ನನ್ನ ಬ್ಲಾಗಿಗೆ ಒಮ್ಮೆಬನ್ನಿ.
wah ..very fine..
ಕೃಷ್ಣಮೂರ್ತಿ ಸರ್, ಕವಿತೆ ಓದಿ ವಿಮರ್ಶಿಸಿದಕ್ಕೆ ಧನ್ಯವಾದಗಳು. ಕಾಲದೊಡನೆ ಕಾಲವಾಗಿಬಿಡುವ, ಲೀನವಾಗಿ ಬಿಡುವುದು, ಕ್ರಿಯೆಯಾಗಿ, ಪ್ರಕ್ರಿಯೆಯಾಗಿ ಗೋಚರಿಸುತ್ತದೆ. ನಿಮ್ಮ ಬ್ಲಾಗಿಗೆ ನಾನು ಹೊಸ ಸೇರ್ಪಡೆ. ನಿಮ್ಮ ಬ್ಲಾಗ್ ಚೆಂದವಿದೆ.
ಗುತಮ್, ಕವಿತೆ ನಿಮಗೆ ಖುಷಿ ತಂದಿದಕ್ಕೆ ನನ್ನಲ್ಲೂ ನೂರ್ಮಡಿ ಖುಷಿ ತಂದಿದೆ.
very nice anna.. :)
ತುಂಬಾ ಅದ್ಭುತವಾಗಿ ಬರೆದಿದ್ದೀಯ ವಿನಿ. ಕಾಲದ ಹರಿವಿನಲ್ಲಿ ನಮ್ಮ ಅಸ್ತಿತ್ವವನ್ನ, ವ್ಯಕ್ತಿತ್ವವನ್ನ ಇರಿಸಿಕೊಳ್ಳುವಿಕೆ, ತುಂಬಾ ಉತ್ತಮವಾದ ಆಲೋಚನೆ. ಕಾಲದೊಡನೆ ನಾವು ಒಮ್ಮೆ ಕಾಲವಾಗಿ, ಮಾಯವಾಗಿಬಿಡುತ್ತೇವೆ ಎಂಬುದು ಸತ್ಯಾನುಸತ್ಯ. ನಿನಗೆ ಶುಭವಾಗಲಿ. ಇನ್ನಷ್ಟು ಕವಿತೆಗಳು ಹೊರಹೊಮ್ಮಲಿ.
ವಿನಯ್..
ತುಂಬಾ ಸೊಗಸಾದ ಸಾಲುಗಳು..!
ಅಭಿನಂದನೆಗಳು..
hmmm its really nice;-)
ninneya galige nenapige seemitha.....indigaste baaluva yathna..ee saalugalu thumba chennagive.kaledu hoda ninneya bagge,baraliruva naleya bagge,chinthisi vrutha kaalaharana..indigaste baaluva yathna...kaaladodane kaalavaagale bekallave ondu dina...!heege bareetha iri..nimma abhimaani..
olleya salugalu..chenaagide kavana.
Raaghu
manushya mostly oduvudu ee kalada hinde matra.. chennagide
visit
www.vanishrihs.blogspot.com
ಪ್ರಮಿಳ ಮೇಡಂ, ನಿಮ್ಮ ಮೆಚ್ಚುಗೆಗೆ, ನನ್ನಲ್ಲಿ ಅನಂತ ಹರ್ಷ.
ರಘು, ವಾಣಿಶ್ರೀ, ಕವಿತೆ ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು.
ಸುಮ್ಮನೆ ನಡೆದು ನಡೆದು
ನನ್ನ ಗಡಿಯಾರದ ಕೈಗಳಿಗೆ
ಕಾಲು ನೋವು ಬಂದು,
ದಾರಿಯುದ್ದಕ್ಕೂ ಮೈಯ ಚಾಚಿ,
ಮಲಗಿದಂತೆ ಮಾಡಿ,
ಮಲಗದಂತೆ ನೋಡಿ,
ಒಂದು ಕನಸು ಕಾಣುವಲ್ಲಿ
ಕಾಯಕದ ತವಕ...!
eshtondu sundara salugalu kaviyavare.... nimma medulinalli enella mane maadi kondide tilita illa..... superb....
Post a Comment