Sunday, August 1, 2010

ಮೊದಲನೇ ಸಾಲು!!


ಇದು ಕೊನೆಯ ಸಾಲು,
ಎಲ್ಲಾ ಅಲ್ಪವಿರಾಮಗಳು ಮುಗಿದು,
ಒಂದು ಚುಕ್ಕಿಯಲ್ಲಿ ಪೂರ್ಣವಿರಾಮ ಬಿಗಿದು,
ಅಂತ್ಯ ಹಾಡಿಬಿಡುವ ಮಂಗಳ ಕಾಲ,
ಬಿರಿದೆ ಬಿಡುವ ಬೀಗಮುದ್ರೆ,
ಮುನ್ನುಡಿ-ಹಿನ್ನುಡಿಯ ನಡುವೆ ಚಿರನಿದ್ರೆ!

ಪದಗಳ ಅವಶೇಷದಲ್ಲಿ ಯಾವ ಲೇಪವೋ,
ಕೋಶಗಳ ಒಳಗೆ ಏನು ಲೋಪವೋ,
ಅರಿಯಬೇಕಷ್ಟೇ ಹೂರಣ ಆದಿ-ಅಂತ್ಯದ ನಡುವೆ,
ಇರಬಹುದು ಒಂದು ನಿಕ್ಷೇಪ,
ಅಥವಾ ದೂರದಲ್ಲೇ ಉಳಿದುಹೋದ ದ್ವೀಪ!

ಈಗಷ್ಟೇ ಜೀವನ್ಮುಖಿ ಕವಿತೆ,
ಗರ್ಭದೊಳಗಿಂದ ಸೂತ್ರ ಹೊಸೆದ ಮೇಲೆ
ಇನ್ನಷ್ಟು ಪ್ರಖರ ಹಣತೆ!
ಮನಸ್ಸು ಅನ್ವೇಷಣೆಗೆ ಪರ್ಯಟನೆ,
ಇದೆಯೆ ಅಸ್ತಿತ್ವದ ಪ್ರಶ್ನೆಗೆ ಒಕ್ಕಣೆ,
ಇದೆ ಮೊದಲನೇ ಸಾಲು!!

13 comments:

Dr.D.T.Krishna Murthy. said...

ಕವಿತೆಯೂ ಒಂದು ಜೀವದಂತೆ ನಿಗೂಢ.ಯಾವ ಮನದ ಬಾಗಿಲು ತಟ್ಟಿ ತೆರದು ಏನು ಅರ್ಥ ಕೊಡುತ್ತೋ!ಸುಂದರ ಕವನ.ಇಷ್ಟವಾಯಿತು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಚನ್ನಾಗಿದೆ ಕವನ.ಅಭಿನ೦ದನೆಗಳು.

babushankar said...

ಹಕ್ಕಿಗೂ ಹಾರುವ ಆಸೆ ಗೂಡು ತೊರೆದು...!

ಪದಗಳೇ ಸಿಗದೇ ಮನ ಚಡಪಡಿಸುತಿದೆ
ಕರದ ಬೆರಳುಗಳು ಸರಿಯಾದ ದಿಕ್ಕು ಕಾಣದೆ ಆ ಕಡೆ ಈ ಕಡೆ ಹರಿದಾಡುತ್ತಿದೆ..
ಇಷ್ಟು ಮಾತ್ರ ಹೇಳಬಲ್ಲೆ....
ನಿಮ್ಮ ಜ್ಞಾನವನ್ನು, ನಿಮ್ಮ ಅಭಿರುಚಿಯನ್ನು
ಕೇವಲ ಪುಸ್ತಕ, ಕಂಪ್ಯೂಟರ್ ಗಳಿಗೆ ಸೀಮಿತ ಗೊಳಿಸದಿರಿ...
ನಿಮ್ಮ ಕಾವ್ಯಭರಿತ ಕವನಗಳು
ಅರ್ಥಗರ್ಭಿತ ಪದಜೋಡಣೆಯ ನುಡಿ ಮುತ್ತುಗಳು
ನಮ್ಮಂತಹ ಅಲ್ಪ ಜ್ಞಾನಿಗಳ ತಿಳುವಳಿಕೆ ಹೆಚ್ಚಿಸಲು ನೆರವಾಗಲಿ
ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಕವನ ಕಾವ್ಯ ಹರಿದು ಬರಲಿ..
ನಿಮ್ಮ ಸ್ನೇಹಕ್ಕೆ ಧನ್ಯ ನಾ....


ಇಂತಿ ನಿಮ್ಮ ಆತ್ಮಿಯ
ಆರ್.ಬಾಬುಶಂಕರ್

ಹೃದಯಶಿವ said...

nimma kavite aardhravaagide.shubhavaagali geleya....

harshan said...

ನಿನ್ನ ಕವಿತೆಯ ಒರಣಕ್ಕೆ, ನಮ್ಮೆಲ್ಲರ ಗಮನ
ನಡೆಯುತಿರಲಿ ನಿನ್ನ ಕಾವ್ಯ ಸೃಷ್ಟಿ, ಇರುವುದೆಮ್ಮ ಹಾರೈಕೆ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುಂದರವಾದ ಕವಿತೆ ಸಾರ್,
ಚೆನ್ನಾಗಿದೆ.

suma sk said...

Vinu,Thumba chennagidhe,Heege Mundhuvaresu,Abhinandhanegalu.

ಸಾಗರದಾಚೆಯ ಇಂಚರ said...

ಸುಂದರ ಕವಿತೆ
ಬಹ ಇಷ್ಟವಾಯಿತು

Vinay.S said...

ಕೃಷ್ಣ ಮೂರ್ತಿ ಸರ್, ಕವಿತೆಗಳು ವಯಕ್ತಿಕ ಭಾವಗಳಿಗೆ ತಕ್ಕಂತೆ ಭಾವ ತೆಲೆದುಕೊಲ್ಲುತ್ತದೆ. ಕವಿತೆಯನ್ನು ಇಷ್ಟ ಪಟ್ಟಿದಕ್ಕೆ ಧನ್ಯವಾದಗಳು.

Vinay.S said...

ಬಾಬು, ಕವಿತೆಯನ್ನ ಮೆಚ್ಚಿಕೊಂಡಿದ್ದೀರಿ. ನನ್ನ ಬರವಣಿಗೆಯ ಸಾರ್ಥಕ್ಯ ಕಾಣುವುದೇ ನಿಮ್ಮ ಓದಿನಲ್ಲಿ, ನಿಮ್ಮ ಮೆಚ್ಚುಗೆಯಲ್ಲಿ. ನಾನು ಧನ್ಯ.

Vinay.S said...

ಗುರು ಹಾಗು ಸುಮಾ, ನಿಮ್ಮ ಮೆಚ್ಚುಗೆಗೆ ನಾನು ಪ್ರಸನ್ನ...!

Raghu said...

ಕವನ ಚೆನ್ನಾಗಿದೆ ವಿನಯ್..
ನಿಮ್ಮವ,
ರಾಘು.

Prathi said...

Out of the world! <3

Search This Blog