Tuesday, July 6, 2010

ಸಂವೇದನೆ

ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಸ್ಥಾವರದಲ್ಲಿ ಹುಟ್ಟಿ ಜಂಗಮದೆಡೆಗೆ ನಡೆದಾಗ
ಅಳಿಯದೇ ಉಳಿದುಹೋದ ಜೀವ!

ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಜೀವ ಜನಿಸಿದಾಗಲೇ ಮರುಹುಟ್ಟು ಪಡೆದು
ಮರುಘಳಿಗೆ ಅರೆಜೀವವಾದ ಜೀವ!!

ನಾನೊಂದು ಹರಿವ ಝರಿಯ ಝುಳು,
ಸರಿದ ದಾರಿಯ ಕವಲು,
ಇಲ್ಲಿ ನನ್ನೊಳಗೆ ಎಳೆ ಬಿಸಿಲು ಕೊಂಕಿಸಿದಾಗ
ಸಂವೇದನೆಯ ನೆಪದಲಿ
ಹುಟ್ಟಿಕೊಂಡ ಕವಿತೆಯಷ್ಟೇ ನಾನು!!

11 comments:

ಯುವಪ್ರೇಮಿ said...
This comment has been removed by the author.
ಯುವಪ್ರೇಮಿ said...

bahala channagide Vinay.

jeevada mele channagi barediddira. it's very nice. :)

Dr.D.T.Krishna Murthy. said...

ನಿಜಕ್ಕೂ ಸಂವೇದನಾಶೀಲ ಕವನ!ತುಂಬಾ ಇಷ್ಟವಾಯಿತು.

Raghu said...

ಸಂವೇದನೆಯ ನೆಪದಲಿ ಹುಟ್ಟಿಕೊಂಡ ಕವಿತೆ ಚೆನ್ನಾಗಿದೆ ಸರ್..
ನಿಮ್ಮವ,
ರಾಘು.

Vinay.S said...

ಮೂರ್ತಿ ಸರ್, ಕವಿತೆ ಇಷ್ಟವಾಗಿದಕ್ಕೆ ತುಂಬಾ ಖುಷಿ ತಂದಿದೆ. ಮೆಚ್ಚುಗೆಗೆ ಧನ್ಯವಾದಗಳು.

Vinay.S said...

ರಘು, ಕವಿತೆ ಬರೆದಾಗಲೆಲ್ಲ ಬೆನ್ನು ತಟ್ಟಿದವರು ನೀವು. ಏನು ಹೇಳಲಿ...?ಧನ್ಯವಾದ.

ಸಾಗರದಾಚೆಯ ಇಂಚರ said...

ಕವಿತೆಯ ಹುಟ್ಟು, ಅದರೊಳಗಿನ ಗುಟ್ಟು
ಮಾಡಿತು ಕವಿತೆಯ ರಟ್ಟು
ತುಂಬಾ ಸುಂದರ ಕವಿತೆ

Vinay.S said...

ಏನೋ ಗುರು, ನೀವು ಪ್ರತಿ ಬಾರಿ ಬಂದು ಚಂದವಿದೆ ಎಂದಾಗಲೇ ನಾನು ಇನ್ನಷ್ಟು ಚಂದವಾಗಿ ಬರೆಯುವ ಹಂಬಲಕ್ಕೆ ನೂಕುತ್ತದೆ. ಧನ್ಯವಾದ ಗುರು.

Ittigecement said...

ವಿನಯ್...

ಬಹಳ ಸುಂದರ ಕವಿತೆ...

ಅಭಿನಂದನೆಗಳು ಚಂದದ ಕವಿತೆಗೆ..

vinod kumar H S said...

gelaya thumba chenagide kano....
nina kavitheya bhava endendu huliyali
gelaya....

inthi ninna preethiya gelaya vinod

V.R.BHAT said...

ಚೆನ್ನಾಗಿದೆ, ಮುನ್ನಡೆಯಿರಿ! ಧನ್ಯವಾದಗಳು

Search This Blog