Wednesday, June 23, 2010

ಕಾರಣ...!

ರಾತ್ರಿ ಕನಸಿನೊಳಗೆ ನೀ ಬಂದ ಸುಳಿವು,
ಕನಸಿನಲಿ ಒಲವು ನನಸಾದಂತೆ ನೆನವು,
ಮುಂಜಾನೆ ಕಣ್ಣುಜ್ಜಿದಾಗ
ದಿಂಬಿನ ಕಾಲಡಿ ಸಿಕ್ಕಿದ್ದು ನಿನ್ನ ಗೆಜ್ಜೆಯಷ್ಟೇ!

ನಿನ್ನ ನೆನಪು ನೆಪ ಮಾತ್ರ,
ಬೇಕಿರುವುದು ನೀನೆ ನೀನು!
ಇಲ್ಲಿ ಜೋರು ಮಳೆಯಾಗಿದೆ ಗೆಳತಿ,
ಮೆಲ್ಲನೆ ತಬ್ಬಿ ಹಿಡಿ ನೀ ನನ್ನ...!

ಒಲವೆಂಬುದು ಇಲ್ಲದಿದ್ದರೆ
ಆರಾಮಾಗೆ ಇದ್ದು ಬಿಡುತ್ತಿದ್ದೆನೇನೋ?
ಮಳೆ ಬಿದ್ದ ಮೇಲೆ ಮಣ್ಣಿನ ಘಮ
ಹಿಡಿಯುವುದಾದರೂ ಎಲ್ಲಿ?

ನಾನಿಲ್ಲಿ ನಿನ್ನ ಅಣತಿಗೆ
ಕಣ್ಣು ಮಿಟುಕಿಸಿ ಕಾದಿದ್ದೇನೆ ಹುಡುಗಿ,
ಆದರೂ ಅಲ್ಲೆಲ್ಲೋ ದೂರದ ತಾರೆ
ಮಿನುಗುವುದಾದರೂ ಏತಕೋ ಗೊತ್ತಿಲ್ಲ!!

10 comments:

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಕವನ
ಅದರಲ್ಲೂ
''ಒಲವೆಂಬುದು ಇಲ್ಲದಿದ್ದರೆ
ಆರಾಮಾಗೆ ಇದ್ದು ಬಿಡುತ್ತಿದ್ದೆನೇನೋ?
ಮಳೆ ಬಿದ್ದ ಮೇಲೆ ಮಣ್ಣಿನ ಘಮ
ಹಿಡಿಯುವುದಾದರೂ ಎಲ್ಲಿ?''

ತುಂಬಾ ಇಷ್ಟದ ಸಾಲುಗಳಿವು

Vinay.S said...

ಗುರು,

ಕವಿತೆ ಮೆಚ್ಚುಗೆಯನ್ನುಂಟು ಮಾಡಿದಕ್ಕೆ ಧನ್ಯವಾದ...! ಇನ್ನಷ್ಟು ಚೆನ್ನಾಗಿ ಬರೆಯಬೇಕು.

Jyoti Hebbar said...

Very nice... super kavana....

Bharath said...

male tumba ne chennag biddide anta gottagtide...

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ತುಂಬಾ ದಿನಗಳ ನಂತರ ಮತ್ತೆ ಕವನ ಬರೆದಿದ್ದೀರಿ....ಕವನ ಚನ್ನಾಗಿದೆ ಈ ಸಾಲುಗಳು ತುಂಬಾ ಚನ್ನಾಗಿದೆ
''ಒಲವೆಂಬುದು ಇಲ್ಲದಿದ್ದರೆ
ಆರಾಮಾಗೆ ಇದ್ದು ಬಿಡುತ್ತಿದ್ದೆನೇನೋ?
ಮಳೆ ಬಿದ್ದ ಮೇಲೆ ಮಣ್ಣಿನ ಘಮ
ಹಿಡಿಯುವುದಾದರೂ ಎಲ್ಲಿ?''

Dr.D.T.Krishna Murthy. said...

There is a spontaneous flow in the poetry.That is a beauty!

Vinay.S said...

ಶ್ರೀಕಾಂತ್, ಕವನ ಬರೆಯಬೇಕೆಂಬ ಹಂಬಲವೇನೋ ಇತ್ತು, ಯಾಕೋ ಮನಸ್ಸಿನ ಬೆಂಬಲವೇ ಇರಲಿಲ್ಲ. ಕವಿತೆ ಮೆಚ್ಚುಗೆಯಾಗಿದಕ್ಕೆ ಖುಷಿ ತಂದಿದೆ.

Vinay.S said...

ಭರತ್, ಮನಸಲ್ಲಿ ಮಳೆ ಬಿದ್ದ ಮೇಲೆ, ನಾನು ಆಚರಿಸಿದ್ದು ನೂರ್ಮಡಿ ಸಂಬ್ರಮ! ನಾನು ಇನ್ನಷ್ಟು ಸ್ಪಷ್ಟವಾಗಿ, ಇಷ್ಟವಾಗುವತೆ ಬರೆಯುವಂತಾಗಲಿ!
ಜ್ಯೋತಿ, ಕವಿತೆ ಇಷ್ಟಪಟ್ಟಿದಕ್ಕೆ ಧನ್ಯವಾದಗಳು.

Raghu said...

nice one. keep writing.
Raaghu

© ಹರೀಶ್ said...

ಸುಂದರ ಕವನ ಸರ್

Search This Blog