
ಮೌನಕೆ ಮಾತಿಲ್ಲ-ಕಥೆಯಿಲ್ಲ,
ಹಾಡು-ಹಸೆಯ ಹಂಗಿಲ್ಲ,
ನಿನ್ನ ನೆನಪು ಎದೆಯ ಗಾಳಕ್ಕೆ ಸಿಲುಕಿ
ಕಲಕಿದಂತೆ ಅಂತರಾಳದ ಕಡಲು,
ಹಾಡೆಲ್ಲ ಮೂಕವಾಗಿ,
ಹಾಡೊಳಗೆ ಶೋಕದ ಸಾಲು....!
ನನ್ನೊಳಗೆ ಉಳಿದುಹೋದ ನಿನ್ನ ನೆನಪು...
ನೆನಪಿಗೆ ಒನಪಿಲ್ಲ-ಒಯ್ಯಾರವಿಲ್ಲ!
ದುಃಖ-ದುಮ್ಮಾನದ ಅರಿವಿಲ್ಲ,
ನಿನ್ನ ಹೆಸರು ಕೂಗಿ ಕರೆಯುವಂತೆ
ಮೌನ ಶಿಖರದೊಳಗೆ,
ಏನು ಹೆಸರು ನಿನ್ನ
ಕೇಳಿಯೂ ಕೇಳದ ಪರಿಗೆ?
ಮನಸು ದುಃಖದ ಸುಳಿಗೆ...!
ನೀನು ಬರೆಯಲಾಗದ ಕವಿತೆ,
ಉರಿಯದ ಒಲವಿನ ಹಣತೆ,
ನನ್ನೊಳಗೆ ಸುಮ್ಮನೆ ಪರಿತಪನೆ!
ದೂರದ ಊರಿಗೆ ಏಕಾಂತ ನಡಿಗೆ
ಚೆಲ್ಲಿದೆ ನನ್ನೊಳಗೆ
ನಿನ್ನ ನೆನಪಿನ ನೆರಳು....!
10 comments:
SUPERB !
Hahaa...! ಅದೇನು ಚಂದವಿದೆಯೋ ಕವಿತೆ...! ಧನ್ಯವಾದ..!
Thumba chennagide....
I really appreciate your taking the time on writing all these and uploading in a creative format!
ಕವಿತೆ ಇಷ್ಟವಾಗಿದಕ್ಕೆ ಮನಸ್ಸು ಖುಷಿ ಪಡುತ್ತಿದೆ. ಮೆಚ್ಚುಗೆ ಗೆ ಧನ್ಯವಾದ. ಸಮಯ ಮಾಡ್ಕೊಂಡು ಬಂದು ಓದಿದಕ್ಕೆ thanks ಕಣೋ.
-ವಿನಯ್.
melunotakke saralavaagi kaanuva padapunja(kavithegala)gala antharaalavannu hokku nodidare gambeeravaada chinthanegalu,manadolagana thallanagala arivu kavanagalalli eddu kanutthade.eg;nenapugalu kalakidanthe antharaalada kadalu,haadella mookavaagi haadolage shokada saalu....really...fantastic.
Sakattagide kavite....
beautiful..............all can understand d poem.....very simple n cute....:)
ಪ್ರಮೀಳ ಮೇಡಂ, ಕವಿತೆಯನ್ನು ಗಂಭೀರವಾಗಿ ಪರಿಶೀಲಿಸಿದಕ್ಕೆ ಧನ್ಯವಾದಗಳು. ದಿನಿ ಮೇಡಂ, ನಿಮ್ಮ ಮೆಚ್ಚುಗೆ ಎಂದಿನಂತೆ ಹಾಗೆಯೇ ಇದೆ. Thanks to u too.
ಸಹನಾ, ನಿಮಗೂ ಧನ್ಯವಾದ..!
-ವಿನಯ್.
good one... thumba chennagide..
ತುಂಬಾ ನೆ ಚೆನ್ನಾಗಿದೆ ವಿನಿ. ಕವಿತೆ ನಿನ್ನಷ್ಟೇ simple ಆಗಿದೆ. Very much ಆಪ್ತ ಕವಿತೆ. ಆದ್ರೆ, ಯಾಕೋ ವಿರಹ...?
-ರಮ್ಯ.
Post a Comment