Sunday, May 20, 2012

ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ!!

ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ. ಹತ್ತಿರ ಇದ್ದರೆ ಒಂದು ರೀತಿಯ ಉಡಾಫೆ, ದೂರ ಇದ್ದರೆ ಮರೆತೇ ಬಿಡುವ ಸಾಧ್ಯತೆ. Out of sight is out of mind ಎನ್ನುತ್ತಾರಲ್ಲ ಹಾಗಾಗಿಬಿಡಬಹುದು. ಈ ನಡುವೆ ವ್ಯಕ್ತಿಗಳ ಮಧ್ಯೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವುದಕ್ಕೆ ಭೌತಶಾಸ್ತ್ರದಲ್ಲಿ ಏನಾದರೂ ಸೂತ್ರಗಳಿವೆಯ ಎಂದು ಹುಡುಕತೊಡಗಿದ್ದೇನೆ. ಹಾಗೇನಾದರೂ ಇದ್ದರೆ ಅದು 'ನ್ಯೂ'-ಟನ್ನೋ - ಓಲ್ಡ್-ಟನ್ನೋ ಎಂಬ ಪುರಾತನ ವಿಜ್ನ್ಯಾನಿ ಒಬ್ಬನಿದ್ದನಲ್ಲ, ಆತನ ಗಮನಕ್ಕೆ ಬಂದಿರಬೇಕಿತ್ತು! ಇದು ಗಮನಾರ್ಹ ಹಾಗು ಗಹನಾರ್ಹ ! ಕೆಲವೊಮ್ಮೆ ದೂರವಿದ್ದರೆ ಒಳಿತೆನ್ನಿಸ ಬಿಡುತ್ತದೆ, ಏಕೆಂದರೆ ದೂರವಿರುವವರ ದೂರುಗಳು ಕೇಳುವುದಿಲ್ಲವಲ್ಲ! ಈಗೆಲ್ಲ ದೂರವಾಣಿ, ದೂರೋ-ವಾಣಿಗಳು ಬಂದುಬಿಟ್ಟಿವೆ. ನಾವು-ನೀವು ಎಲ್ಲರೂ ಸಮಾನವಾಗಿ ಹೆಲ್ಪ್ ಲೆಸ್ಸು ! ಹೀಗೆ ಇತ್ತೀಚಿಗೆ ಗೆಳೆಯನೊಬ್ಬ ದೂರದೂರಿನಿಂದ ನಮ್ಮ ಮನೆಯ ಆಸುಪಾಸಿನಲ್ಲೇ ಮನೆ ಮಾಡಿದ. ಹೋಗಲಿ ಆಜು ಬಾಜಿನಲ್ಲೇ ಸಿಗುತ್ತಾನಲ್ಲ ಎಂದುಕೊಂಡರೆ, ವಾರಕ್ಕಿರಲಿ- ತಿಂಗಳುಗಟ್ಟಲೆ ಪತ್ತೆಯೇ ಇಲ್ಲ ಆಸಾಮಿ. ವಾರಕ್ಕೊಮ್ಮೆಯಾದರೂ ಫೋನು ಮಾಡುತ್ತಿದ್ದವನಿಗೆ, ಹತ್ತಿರ ಮನೆ ಇದ್ದೂ ಸಿಗಲಾಗದಷ್ಟು ಯಾವ ಕಾಡು ಕಡಿಯುವಷ್ಟು ಕೆಲಸ ಬಿದ್ದಿದೆ ಎಂದು ಮನೆ ಹೊಕ್ಕರೆ, ನಾಲ್ಕು ದಿಕ್ಕುಗಳಿಗೂ ಕೈ-ಕಾಲು ಚಾಚಿಕೊಂಡು ಮಲಗಿಕೊಂಡಿರುವುದ..? ಅಕಟಕಟಾ ಎಂದುಕೊಂಡು ಕಾರಣ ಕೇಳಿದರೆ, ಇಲ್ಲೇ ಸಿಗ್ತೀಯಲ್ಲ ಎಂದು ಸುಮ್ಮನಿದ್ದೆ ಅನ್ನುವುದ..?
ದೂರವಿದ್ದಾಗ ಹತ್ತಿರ ಬಾ ಎನ್ನಬಹುದು, ಆದರೆ ಹತ್ತಿರವಿದ್ದಾಗ ದೂರ ಹೋಗು ಅನ್ನುವುದು ಅನುಚಿತ. ಗೆಳತಿ ದೂರದಲ್ಲಿ ಇದ್ದಾಗ ," ಹತ್ತಿರ ಹತ್ತಿರ ಬಾ.." ಎಂದು ಹಾಡಬಹುದು. ದೂರ ಹೋಗು ಎಂದು ನಿರಾಕರಿಸಲು ಯಾವ ಹಾಡೂ ಇರಲಾರದು. ಇದ್ದರೆ ಆ ಹಾಡಿಗೆ ಯಾವ ಗಮ್ಮತ್ತೂ ಸಲ್ಲದು ಹಾಗು ಸಲ್ಲಕೂಡದು! ಆದರೂ ಯಾರು ತಾನೇ ಗೆಳತಿಯನ್ನು ದೂರ ಹೋಗು ಎಂದಾರು? ಆ ಮಟ್ಟಿನ ನಿರ್ದಾಕ್ಷಿಣ್ಯತೆ ಯಾವ ಗಂಡು ಮಕ್ಕಳಲೂ ಕಾಣೆ! ದೂರ ಹೋದಮೇಲೆ ಹಲುಬುವುದು, ವಿರಹ ಗೀತೆ ಹಾಡುವುದು ಇದ್ದೆ ಇದೇ! ಹೆಂಡತಿಯಂತಹ ಜೀವಿ ಹತ್ತಿರವಿದ್ದರೆ ಕೋಟಿ ರೂಪಾಯಿ ಮೌಲ್ಯ ಬಾಳಬಹುದು. ತವರು ಮನೆಗೆ ಹೋಗಿ ದೂರವಾದಾಗ, ದೂರ ಭಾರವೆನಿಸಿದರೂ, ದುಬಾರಿಯೆನಿಸಿದರೂ ಅದರ ನಿಖರವಾದ ಮೌಲ್ಯ ಇನ್ನೂ ಎಂಥಹ ಗಂಡು ಪ್ರಾಣಿಗೂ ತಿಳಿದ ಹಾಗಿಲ್ಲ. ಆದರೂ ಹತ್ತಿರ ಇದ್ದೂ ಸಹ ಇನ್ನೂ 'ರಾ..ರಾ..' ಎನ್ನುವ ಪ್ರೇಮಿಗಳ ಕಂಡು ಇನ್ನೆಲಿಗೆ ಬರಬೇಕೋ ಎಂದು ಬೆರಗು ಬೆರಗು, ನಿಬ್ಬೆರಗು! ಆದರೂ ಈ ದೂರ-ಹಾಗು ಹತ್ತಿರ ಇದೊಂದು ರೀತಿಯ ವಿಸ್ಮಯವೇ ಸರಿ. ದೂರ ಹಾಗು ಹತ್ತಿರ ಕೆಲವೊಮ್ಮೆ ಮನಸ್ಥಿತಿಗಳ ಮೇಲೆ ಅವಲಂಬಿತ. ಬೆಂಗಳೂರಿನಂತಹ ಜನನಿಬಿಡ ಊರಿನಲ್ಲಿ ದೂರ ಹಾಗು ಹತ್ತಿರವನ್ನು ಸ್ಪಷ್ಟವಾಗಿ define ಮಾಡುವುದು ಕಷ್ಟಸಾಧ್ಯ. ಕೆಲವೊಮ್ಮೆ ಪಕ್ಕದ ಬೀದಿಗೆ ಹೋಗುವುದು ಸಹ ದೂರವೆನಿಸಬಿಡಬಹುದು, ದುಸ್ಸಾಧ್ಯವಾಗಬಹುದು. ಹತ್ತಿರವಿದ್ದೂ ಸಹ ದೂರವಾದ ಮನಸ್ಸುಗಳು ಒಂದು ಕಹಿ ಉದಾಹರಣೆ ಮಾತ್ರ. ದೂರದಲ್ಲೇ ಏನೋ ಹಿತವಿದೆ ಎಂದು ಊಹಿಸುತ್ತ, ಊಹೆಯ ಸುತ್ತಾ ಸುತ್ತುತ್ತಾ ಇರುವುದು ಒಳಿತು.ದೂರದ ಬೆಟ್ಟ ನುಣ್ಣಗೆ ಎನ್ನುತ್ತಾರೆ. ಹತ್ತಿರ ಇರುವ ಬೆಟ್ಟದ ಬಗ್ಗೆ ಯಾವ ಗಾದೆಯೂ ಇಲ್ಲ, ತಗಾದೆಯೂ ಇಲ್ಲ. ಹತ್ತಿರದ ಹಾಗು ಯಾರೂ ಹತ್ತಿರದ ಬೆಟ್ಟವೆ ಸೇಫು, ಹತ್ತದಿದ್ದವರಿಗೆ ರಿಲೀಫು. ದೂರದ ಬೆಟ್ಟ ಯಾಕೆ ನುಣ್ಣಗೆ ಎನ್ನುವುದು ಅದು ದೂರ ಇರುವ ಕಾರಣವೋ, ಅಥವಾ ದೃಷ್ಟಿಯ ನೆವವೋ? ಅಥವಾ ಬೆಟ್ಟಕ್ಕೆ ತಗುಲಿರುವ ಅಪವಾದವೋ! ಆಟೋ ಹಾಗು ಲಾರಿಗಳ ಹಿಂಬದಿಯಲ್ಲಿರುವ 'ನಡುವೆ ಅಂತರವಿರಲಿ' ಎಂಬುದು ನಾವು ಎಷ್ಟು ದೂರ ಇರಬೇಕು ಎಂದು ಸೂಚಿಸುತ್ತದೋ, ಅಥವಾ ಎಷ್ಟು ಅಂತರ ಇಡಬೇಕು ಎಂದು ಹೇಳುತ್ತದೋ ಸ್ಪಷ್ಟವಿಲ್ಲ. ದೂರವಿದ್ದರೆ ಅದಕ್ಕೊಂದು ಅಳತೆ, ಗೋಲು[Goal] ಹಾಗು ಅಳತೆಗೋಲು ಎಲ್ಲವೂ ಇರುತ್ತದೆ. ಹತ್ತಿರವಿರುವುದು ಕೊಂಚ Subjective! ಅದರೆಡೆ ಯಾವಾಗಲೂ ನಿರಾಕರಣೆ ಇದ್ದೆ ಇರುತ್ತದೆ. ಆದರೂ ಈ ಅಹಮ್ಮಿನ ಕೋಟೆಯಲಿ, ಹತ್ತಿರವಿದ್ದೂ ದೂರ ನಿಲ್ಲುವವರ ಬಗ್ಗೆ ಏನೆನ್ನ ಬೇಕೋ ತೋಚುವುದಿಲ್ಲ. ದೂರದ ನೆಂಟರು ಎಂಬ ಮಾತಿದೆ, ಅವರು ದೂಶಿಸದಿರುವ ನೆಂಟರೋ ಅಥವಾ ದೂರದ ಸಂಬಂಧಿಗಳೋ? ನೆಂಟರು ಹತ್ತಿ ಮೇಲೇರದಿದ್ದರೆ ಸಾಕು! ಕೆಲವೊಮ್ಮೆ ಆಲೋಚನೆಗಳೂ ಸಹ ದೂರದ ಆಲೋಚನೆಗಳಾಗಿರುತ್ತವೆ. ಆದರೆ ಇಂತಹ ದೂರಾಲೋಚನೆಗಳು ದುರಾಲೋಚನೆಗಳಾಗದಂತೆ ಎಚ್ಚರವಹಿಸಬೇಕು ಅಷ್ಟೆ.ಹಾಗಾದರೆ ನಮ್ಮ ಬಳಿ instant ಆಗಿ ದೊರೆಯುವ ಆಲೋಚನೆಗಳಿಗೆ ಯಾವ ಮಾನ್ಯತೆಯೂ ಇಲ್ಲವೆಂದೇನೂ ಇಲ್ಲ, ಅವುಗಳೆಲ್ಲ ಇನ್ಸ್ಟಂಟ್ ಕಾಫಿಯಂತೆ ಇನ್ಸ್ಟಂಟ್ ಥಾಟ್ಸ್ ಗಳಾಗಿ [ Instant T ] ರೂಪತಾಳುತ್ತವೆ. ಇವನ್ನು ಹತ್ತಿರಾಲೋಚನೆ ಎನ್ನುವುದು ಎಷ್ಟು ಹಾಸ್ಯಾಸ್ಪದ!? ಪ್ರೇಮಕ್ಕೆ ಹಾಗು ಭಕ್ತಿಗೆ ಎಂತಹ ದೂರವನ್ನೂ ಹತ್ತಿರವಾಗಿಸುವ ಶಕ್ತಿಯಿದೆ. ರಾಧೆಗೆ ಕೃಷ್ಣ ಒಲಿದಂತೆ, ಪ್ರೇಮ ಹಾಗು ಭಕ್ತಿ ಬಾಳೆಹಣ್ಣು ಸುಲಿದಂತೆಯೆ? ಇದಕ್ಕೆ ತಪಸ್ಸು ಮುಖ್ಯ ಆದರೆ ಬಾಳೆಹಣ್ಣು ಸುಲಿಯಲು ತಪಸ್ಸಿನ ಅವಶ್ಯಕ್ಲತೆ ಬೇಡ! ಇಂಥಾ ಆಲೋಚನೆಗಳ ನಡುವೆ ದೂರವಿದ್ದರೂ ಯಾರನ್ನೂ ದೂರದೇ ಹತ್ತಿರವಿದ್ದರೂ ಅತೀ ಎನಿಸದೆ ಇರುವುದು ಒಳಿತು. ಏನಂತೀರಿ....??

2 comments:

Anonymous said...

thumba chenagi bardideera, l liked your richness of kannada words

Payoffers dotin said...

Earn from Ur Website or Blog thr PayOffers.in!

Hello,

Nice to e-meet you. A very warm greetings from PayOffers Publisher Team.

I am Sanaya Publisher Development Manager @ PayOffers Publisher Team.

I would like to introduce you and invite you to our platform, PayOffers.in which is one of the fastest growing Indian Publisher Network.

If you're looking for an excellent way to convert your Website / Blog visitors into revenue-generating customers, join the PayOffers.in Publisher Network today!


Why to join in PayOffers.in Indian Publisher Network?

* Highest payout Indian Lead, Sale, CPA, CPS, CPI Offers.
* Only Publisher Network pays Weekly to Publishers.
* Weekly payments trough Direct Bank Deposit,Paypal.com & Checks.
* Referral payouts.
* Best chance to make extra money from your website.

Join PayOffers.in and earn extra money from your Website / Blog

http://www.payoffers.in/affiliate_regi.aspx

If you have any questions in your mind please let us know and you can connect us on the mentioned email ID info@payoffers.in

I’m looking forward to helping you generate record-breaking profits!

Thanks for your time, hope to hear from you soon,
The team at PayOffers.in

Search This Blog