Thursday, October 15, 2009

ನಿನ್ನ ಒಲವೊಳಗೆ..


ಮೌನದ ಮನೆಯೊಳಗೆ
ಚೆಲ್ಲಿಹೋದ ನಿನ್ನ ಮಾತುಗಳು
ಪೋಣಿಸಿ ಹೆಣೆದ ಸಂಗೀತ,
ದನಿಯಾಗಿ ಮಾರ್ದನಿಯಾಗಿ ನನ್ನೊಳಗೆ
ನಿರಂತರ ಹರಿವ ಝರಿಯಂತೆ..!

ಮನಸಿನ ನೀಲ ನಕ್ಷೆಯಲಿ
ನಿನ್ನ ಗುರುತಿನಚೀಟಿ ಹಿಡಿದು
ಅಲೆಯುವ ನಾನು ಅನಾಮಿಕ,
ಪ್ರೀತಿ ನನ್ನುಸಿರು,
ನನಗೇಕೆ ಹೆಸರು?!

ರೂಪದ ಬಲೆಯೊಳಗೆ ಹಿಡಿದು ನನ್ನ
ಕರೆದೊಯ್ಯಬಾರದೆ ದೂರಕೆ?
ಕಣ್ಣ ಸನ್ನೆ, ಮೂಕ ಭಾಷೆ ಏತಕೆ!

ನನ್ನೊಳಗೆ ನೀ ಹುಣ್ಣಿಮೆಯಲಿ ಉದಯಿಸಿದ ಚಂದಿರ,
ಚುಕ್ಕಿಗಳೊಡನೆ ಇರಿಸಿದ ರಂಗವಲ್ಲಿ,
ನೆನಪುಗಳಿಗೆ ಹಸಿರು ಬಣ್ಣದ ತೋರಣ,
ಹೇಳು ಹುಡುಗಿ ಪ್ರೀತಿಗೆ ಬೇಕೇ ಕಾರಣ?
ನನ್ನೊಳಗೆ ನೀನಿರಲು ಚಂದಿರನ ಚಂದ,
ಚುಕ್ಕಿಗಳ ಮಿಂಚು.....!!

ಮನದ ಮಂದಿರದಲ್ಲಿ
ಒಲವಸುಮ ಬಿರಿದ ಘಮ,
ಎದೆಯ ಗಂಟೆಯಲಿ ನಿನ್ನ ಮೃದು ಕರಸ್ಪರ್ಶ,
ನನ್ನಲ್ಲಿ ಮಿಡಿವ ದೈವ ಗಾನ ಮಾತ್ರ ನಿನ್ನದು.

ಇಬ್ಬನಿಯ ನಿನ್ನ ತುಟಿಯಲಿ
ನನ್ನ ಹೆಸರ ಪಿಸುಗುಡಬಾರದೆ?
ಯಾರಿಗೂ ಕೇಳದಂತೆ!
ಪ್ರತಿ ಬಾರಿಯೂ ತಿರುಗಿ
ನನ್ನೆಡೆಗೆ ನೋಡಬಾರದೇ,
ಯಾರಿಗೂ ಕಾಣದಂತೆ!!

4 comments:

Sharu said...

ಚೆನ್ನಾಗಿದೆ ವಿನಿ :)

Unknown said...

ತುಂಬಾ ನೆ ಚೆನ್ನಾಗಿದೆ ವಿನಿ. ಇಷ್ಟ ಆಯ್ತು. ಸ್ವಲ್ಪ ghazal ಥರ ಇದೆ ಅನ್ನಿಸ್ತು.

bisi bisi suddi said...

ಇಬ್ಬನಿಯ ನಿನ್ನ ತುಟಿಯಲಿ
ನನ್ನ ಹೆಸರ ಪಿಸುಗುಡಬಾರದೆ?
ಯಾರಿಗೂ ಕೇಳದಂತೆ!
ಪ್ರತಿ ಬಾರಿಯೂ ತಿರುಗಿ
ನನ್ನೆಡೆಗೆ ನೋಡಬಾರದೇ,
ಯಾರಿಗೂ ಕಾಣದಂತೆ!!
......................so fine vinay

Mrs. shrinivas said...

What a lovely, romantic poem yaar, i liked it very much specially last paregraph of this poem.

Search This Blog