
ಕರಗಿದ ಕನಸಿನ ನೂರು ಬಣ್ಣಗಳನ್ನು
ಅಳಿಸಬಾರದೆ ಯಾರೋ?!
ಒಣಗಿಹೋದ ನನ್ನ ನೂರು ಆಸೆಗಳನು
ಸುಡಬಾರದೇ ಯಾರೋ?
ನನ್ನ ಊರಿನಲಿ ಯಾವುದೋ ದುಃಖದ ನದಿ,
ನನ್ನ ಕಣ್ಣಲ್ಲೂ ಹರಿಯುತಿದೆ.
ಒಮ್ಮೆ ನನ್ನ ನಗಿಸಬಾರದೆ ಯಾರೋ?
ನಾನಿರುವ ಗುರುತು ಹೋಗಿದೆಯೇ ಮರೆತು?
ನಾನು ಬದುಕಿರುವ ಸುದ್ಧಿ ನಿನಗೆ
ತಿಳಿಸಬಾರದೇ ಯಾರೋ?
ನಿನ್ನ ಮೌನದ ನೋವು ನನ್ನಲ್ಲಿ ಕಡಿಮೆಯಾಗುವುದೇ?
ಮೌನ ಮುರಿದು ನಿನ್ನೊಡನೆ
ನನ್ನ ಸೇರಿಸಬಾರದೆ ಯಾರೋ...?!
5 comments:
bhavane , bhava, channagide
Tumba chennagide Viny. Kavitheyalliro novu, tumba chennagi chitrana vaagide..
Regards,
Ramya.
Thank u Raghu and Ramya.
tumbaa chennagide kavite. Novu anubhavisadiddavaru kooda novannu artha maadikollabahudu. Innu iodex hachchttini anta helabedi... ha ha ha....
Hay I can see that they are infact dedicaed to someone speacial or some one special is in the mind.... Who is that Vinay.. eshtondu noovu kodthidare yaroo?
Post a Comment