
ನಿನ್ನ ಹೆಜ್ಜೆ ಹಾದಿ ಹಿಡಿದು ಹೋದೆ,
ಸಿಕ್ಕಿದ್ದು ಒಂದಷ್ಟು ಕವಿತೆ,
ಕವಿತೆಯೊಳಗೆ ಹಾಸುಹೊಕ್ಕವಳು,
ನನ್ನೊಳಗೆ ಮೆಲ್ಲಗೆ ನಕ್ಕವಳು,
ಕನಸಲಿ ನಿನ್ನ ಕರೆದಾಗ ಕಂಡಿದ್ದು
ಕಾಮನಬಿಲ್ಲಿನ ಸಾಲು!
ಹೂವಿನ ಕಿವಿಯೊಳಗೆ ದುಂಬಿ
ಹಾಡಿ ಹೋದ ಹಾಡು,
ನನ್ನೆದೆಯೊಳಗೆ ನಿನ್ನದು!
ನಿನ್ನ ಹಾಡಿಗೆ ತಲೆದೂಗುವ ಹೂವು,
ನಿನ್ನ ತುಟಿಯ ಮುತ್ತಲ್ಲಿ ಸಿಕ್ಕಿದ್ದು
ಮಕರಂಧದ ಪಾಲು !