ನಾನೊಂದು ಕವಿತೆಯ ಸಂವೇದನಾಶೀಲ ಭಾವ,ಸ್ಥಾವರದಲ್ಲಿ ಹುಟ್ಟಿ ಜಂಗಮದೆಡೆಗೆ ನಡೆದಾಗ
ಅಳಿಯದೇ ಉಳಿದುಹೋದ ಜೀವ!
ನಾನೊಂದು ಕವಿತೆಯ ಸಂವೇದನಾಶೀಲ ಭಾವ,
ಜೀವ ಜನಿಸಿದಾಗಲೇ ಮರುಹುಟ್ಟು ಪಡೆದು
ಮರುಘಳಿಗೆ ಅರೆಜೀವವಾದ ಜೀವ!!
ನಾನೊಂದು ಹರಿವ ಝರಿಯ ಝುಳು,
ಸರಿದ ದಾರಿಯ ಕವಲು,
ಇಲ್ಲಿ ನನ್ನೊಳಗೆ ಎಳೆ ಬಿಸಿಲು ಕೊಂಕಿಸಿದಾಗ
ಸಂವೇದನೆಯ ನೆಪದಲಿ
ಹುಟ್ಟಿಕೊಂಡ ಕವಿತೆಯಷ್ಟೇ ನಾನು!!



